ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮನ್ನಣೆ – ಎಸ್ ಐ ಓ ಶ್ಲಾಘನೆ

by | Feb 17, 2010

ಬೆಂಗಳೂರು:ಆಯಷಾಗೆ ಸ್ಕಾರ್ಫ್ ಧರಿಸಿ ಪುನಃ ತರಗತಿಗೆ ಹಾಜರಾಗಲು ಅವಕಾಶ ಮಾಡಿಕೊಡುವ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮನ್ನಣೆ ನೀಡಿರುವ ಎಸ್ ವಿ ಎಸ್ ಕಾಲೇಜು ಬಂಟ್ವಾಳದ ಹೊಸ ಹೆಜ್ಜೆಯನ್ನು ಎಸ್ಐಓ ರಾಜ್ಯ ಘಟಕವು ಶ್ಲಾಘಿಸುತ್ತದೆ. ಇದು ಭಾರತೀಯ ವಿದ್ಯಾರ್ಥಿನಿಯೊಬ್ಬಳ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಸಂದ ಪ್ರಾಥಮಿಕ ಜಯವಾಗಿದೆ. ಕಾಲೇಜಿನ ಆವರಣದಲ್ಲಿ ಚೂಡಿದಾರ್ ಮತ್ತು ದುಪ್ಪಟ್ಟ ಸ್ವಾಗತಾರ್ಹವಾದರೂ ಅವು ಹೆಣ್ಣಿನ ಘನತೆ ಮತ್ತು ಆಕರ್ಷಣೀಯ ಭಾಗಗಳನ್ನು ಮರೆಮಾಚು ವಂತಿರಬೇಕು. ವಿಧ್ಯಾರ್ಥಿನಿ ತನ್ನ ಈ ಹಕ್ಕಿಗಾಗಿಯೇ ಹೋರಾಡಿದ್ದು ಎಂಬುದನ್ನು ಅವಲೋಕಿಸಬೇಕಾಗಿದೆ. ಬಹುಧರ್ಮೀಯ ಸಮಾಜದಲ್ಲಿರುವಾಗ ಧಾರ್ಮಿಕ ಅಸ್ಮಿತೆ ಮತ್ತು ಗುರುತುಗಳಿಗೆ ಸಂವಿಧಾನ ನಮಗೆ ಸ್ವಾತಂತ್ರ್ಯ ನೀಡುವಾಗ ಅದನ್ನು ನಾವು ಮುಸ್ಲಿಂ ಅಸ್ಮಿತೆ ಬಂದಾಗ ಮಾತ್ರ ಒಂದು ವಿವಾದವಾಗಿ ಮಾಡುವುದು ಮಾತ್ರ ಎಷ್ಟು ಸರಿ. ಕ್ರೈಸ್ತರ, ಹಿಂದೂಗಳ ಮತ್ತು ಸಿಕ್ಖರ ಧಾರ್ಮಿಕ ಸಂಕೇತಗಳನ್ನು(ಸಂತರು ಧರಿಸುವ) ನಾವು ಪ್ರಶ್ನಿಸುವುದು ಹೇಗೆ ಸರಿಯಲ್ಲವೋ ಬುರ್ಖಾದ ಬಗ್ಗೆಯು ಈ ಧೋರಣೆ ಇನ್ನೂ ಪ್ರಕಟವಾಗದಿರುವುದು ವಿಷಾದನೀಯ ಎಂದು ಖೇದ ವ್ಯಕ್ತ ಪಡಿಸುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ಎಸ್ ಐ ಓ ಅಭಾರಿಯಾಗಿದೆ ಮಾತ್ರವಲ್ಲ ವಿಧ್ಯಾರ್ಥಿ ಹಕ್ಕು ಹರಣ ಸಮಯದಲ್ಲಿ ಮುಂದೆಯು ಜಾತಿ ಮತ ಧರ್ಮ ಬೇಧವೆನ್ನದೆ ಎಲ್ಲರು ಒಂದು ಗೂಡಬೇಕಾಗಿದೆ ಎಂದು ಮನವಿ ಮಾಡುತ್ತದೆ.

Posted: 2009-09-05 05:10:00

0 Comments

Related Posts